ಚಿತ್ರ: ಗುಣವಂತ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ರಾಜೇಶ್ ಕೃಷ್ಣನ್, ಚಿತ್ರ ಕೆ.

ಕೊಳ್ಳೆ ನನ್ನ ಮುತ್ತಿನ ಸಹಿಯ |೨|
ಸುವ್ವಿ ಸುವ್ವಿ ಸಾಯಂಕಾಲ ಪ್ರೀತಿ ಚೆನ್ನ
ಟುವ್ವಿ ಟುವ್ವಿ ಟುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!

ಕೊಳ್ಳೊ ನನ್ನ ಮುತ್ತಿನ ಸಹಿಯ |೨|
ಟುವ್ವಿ ಟುವ್ವಿ ಪ್ರಾತಃಕಾಲ ಪ್ರೀತಿ ಚೆನ್ನ
ಸುವ್ವಿ ಸುವ್ವಿ ಸುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!

ಹೃದಯ ಎತ್ತಿಟ್ಟು, ಬಚ್ಚಿಟ್ಟು ನೀಡಿದ ಮುತ್ತಿದು
ಪ್ರೀತಿ, ಪ್ರಮಾಣ, ಕನಸುಗಳು ಇದರಲ್ಲಿದೆ..

ಹೆಣ್ಣು ತಾ ಮೆಚ್ಚೊ ತವರನ್ನೆ ಮರೆಸುವ ಮುತ್ತಿದು
ಆಸೆ, ಅಭಿಮಾನ, ಹೊಸ ಜಗವೆ ಇದರಲ್ಲಿದೆ..

ಹುಡುಗಿ..
ಹೇಳೊ..
ಹುಡುಗಿ..
ಕೇಳೊ..
ಒಂದೆ ಸಮವಿರಲಿ.. ನಿನ್ನ 
ಪ್ರೀತಿ
ನನ್ನ ..
ಪ್ರೀತಿ.. ಎಲ್ಲಾ ಕಾಲಕ್ಕು!

ಕೊಳ್ಳೆ ನನ್ನ ಮುತ್ತಿನ ಸಹಿಯ |೨|
ಸುವ್ವಿ ಸುವ್ವಿ ಸಾಯಂಕಾಲ ಪ್ರೀತಿ ಚೆನ್ನ
ಟುವ್ವಿ ಟುವ್ವಿ ಟುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!

ಜಾರಿ ಹೋದೆನು ಜೋಪಾನ ಕಣ್ಣಲಿ ಇದ್ದರೆ 
ಎದೆಯ ಒಳಗಿರಿಸು ನಿನ್ನಳುವ ತಡೆಯುವೆ!

ನಿನ್ನ ನಾ ಗೆದ್ದೆ ಅಂತಿದ್ದೆ 
ಆದರೆ.. ಸುಳ್ಳದು
ನನ್ನೆ ನಾನೀಗ ಕಳಕೊಂಡೆ ಪ್ರೀತಿಗೆ..

ಹುಡುಗಾ..
ಹೇಳೆ..
ಹುಡುಗಾ..
ಕೇಳೇ.. 
ಎಲ್ಲಾ ಗಾಯಕ್ಕು.. ಪ್ರೀತಿ 
ಮದ್ದು..
ಮದ್ದೆ..
ಪ್ರೀತಿ.. ಕಾಲ ಕಾಲಕ್ಕು!

ಕೊಳ್ಳೆ ನನ್ನ ಮುತ್ತಿನ ಸಹಿಯ 
ಕೊಳ್ಳೊ ನನ್ನ ಮುತ್ತಿನ ಸಹಿಯ
ಸುವ್ವಿ ಸುವ್ವಿ .. ಸಾಯಂಕಾಲ.. ಪ್ರೀತಿ ಚೆನ್ನ
ಟುವ್ವಿ ಟುವ್ವಿ .. ಟುವ್ವಿ ಅಂತ.. ಪ್ರೀತ್ಸು ನನ್ನ
ಪ್ರೀತ್ಸು ನನ್ನ!

Category: ಕನ್ನಡ ಚಿತ್ರಸಾಹಿತ್ಯ
Category: ಗುಣವಂತ ಚಿತ್ರ
Category: ಹಂಸಲೇಖ ಸಾಹಿತ್ಯ
Category:Kannada